Sunday 23 October 2011

ಚಿಣ್ಣರ ಕಟ್ಟೆ


 ಆತ್ಮೀಯರೇ,


 ನಮ್ಮ ತಂಡದಿಂದ  ಸೂಗೂರಿನಲ್ಲಿ ಆಯೋಜಿಸಲಾದ ಚಿಣ್ಣರ ಕಟ್ಟೆ ಎಂಬ ಹಳ್ಳಿ ಹೈಕಳ ಮಕ್ಕಳ ಶಿಬಿರವು ಅಂತಿಮ ಹಂತ ತಲುಪಿದ್ದು, ದಿನಾಂಕ 24/10/2011 ರಂದು ಸಂಜೆ 6.30ಕ್ಕೆ ಸೂಗೂರಿನಲ್ಲಿ  ಮಕ್ಕಳ ನಾಟಕ  'ಉಸಿರ' ಪ್ರದರ್ಶನಗೊಳ್ಳಲಿದೆ.


ಶಿಬಿರದ ಹಿನ್ನೆಲೆ:
ನಾವು ಮಕ್ಕಳ ಶಿಬಿರವನ್ನು ನಡೆಸಬೇಕೆಂದುಕೊಂಡಾಗ  ಎಲ್ಲಿ? ಎಂಬ ಪ್ರಶ್ನೆ ಎದುರುಗೊಂಡಿತು. ರಜೆ ಬಂತೆಂದರೆ ಸಾಕು ಬೇಸಿಗೆ ಶಿಬಿರಗಳು ಜೊತೆ ಜೊತೆಗೆ ಆರಂಭಗೊಂಡುಬಿಡುತ್ತದೆ. ಇಂತಹ ಶಿಬಿರಗಳು ನಗರಗಳಿಗೆ ಮಾತ್ರ ಸೀಮಿತಗೊಂಡಿರುತ್ತದೆ. ಹಾಗಾಗಿ ಹಳ್ಳಿಯ ಮಕ್ಕಳಿಗಾಗಿ ಶಿಬಿರವನ್ನು ಆಯೋಜಿಸಬೇಕೆಂದು  ತೀಮಾಱನಿಸಿದೆವು. ಈ ಶಿಬಿರವನ್ನು ಶಿವಮೊಗ್ಗದಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಸೂಗೂರು ಎಂಬ ಹಳ್ಳಿಯಲ್ಲಿ ನಡೆಸಲು ಹಳ್ಳಿಯ ಮುಖ್ಯಸ್ಥರನ್ನು ಭೇಟಿ ಮಾಡಿ, ಅನುಮತಿ ಪಡೆದುಕೊಂಡೆವು.

ಶಿಬಿರದ  ಉದ್ದೇಶ:
* ಕೇವಲ ನಗರಗಳಿಗಷ್ಟೆ ಸೀಮಿತವಾಗಿರುವ ಶಿಬಿರವನ್ನು ಹಳ್ಳಿಗಳಲ್ಲಿ ನಡೆಸಬೇಕು.
* ಶಿಬಿರದ ಹೆಸರಲ್ಲಿ ಅನಾವಶ್ಯಕವಾಗಿ ಹಣ ಸಂಪಾದಿಸದಿರುವುದು.
* ಹಳ್ಳಿಗಳಲ್ಲಿ ಸಿಗುವಂತಹ ವಸ್ತುಗಳ ಬಳಕೆ ಮತ್ತು ಉಪಯೋಗಿಸದೆ ಅಥವಾ ಬಳಸದೆ ಬದಿಗಿಟ್ಟ ವಸ್ತಗಳ ಬಳಕೆಯಾಗಬೇಕು.
* ಒಟ್ಟಿನಲ್ಲಿ ಕಸದಿಂದ ರಸ  ಎಂಬ ನಿಟ್ಟಿನಲ್ಲಿ ಶಿಬಿರ ಸಾಗಬೇಕು ಎಂಬುದಷ್ಟೆ ನಮ್ಮ ಮುಖ್ಯ  ಉದ್ದೇಶ ಹಾಗೂ ಧೋರಣೆಯಾಗಿತ್ತು ಎಂದು ಹಳ್ಳಿಯವರಿಗೆ ನಮ್ಮ  ಆಶಯವನ್ನು ಸ್ಪಷ್ಟಪಡಿಸಿದೆವು.
ಹೀಗೆ ಕಸದಿಂದ ರಸ ಹೇಗೆ ಎಂಬ ಪ್ರಶ್ನೆ ಅಂದು ಅವರಿಗೂ ಕಾಡಿದ್ದಿರಬಹುದು. ಈಗ ನೀವೆ ಈ ಕೆಳಗಿನ ಚಿತ್ರಗಳನ್ನು ಗಮನಿಸಿ. ಹರಿದು ಹೋದ ಗೋಣಿಚೀಲವಿರಬಹುದು, ಹಳೆ ಸೀರೆಗಳಿರಬಹುದು, ಅಡಿಕೆ ಹಾಳೆ, ತೆಂಗಿನ ಗರಿ, ಕೆಮ್ಮಣ್ಣು ಇನ್ನೂ ಹಲವು ಈ ರೀತಿಯ ವಸ್ತುಗಳನ್ನು ಬಳಸಿ ಶಾಲೆಯನ್ನು ಅಂದಗೊಳಿಸಲಾಯಿತು. ಇವುಗಳನ್ನೆಲ್ಲಾ ಮಕ್ಕಳಿಂದಲೇ ಮಾಡಿಸಲಾಯಿತು.
ಇದರ ಹಿಂದಿನ ಸೃಜನಶೀಲತೆಗೆ ಕಾರಣರಾದವರು ಈಶ ಎಂ.ಸಿ. ಹಳ್ಳಿ, ಪ್ರವೀಣ್ ಹಾಲ್ಮತ್ತೂರು ಮತ್ತು ಸತೀಶ್.


ಶಿಬಿರದಲ್ಲಿ ಏನೇನು ಹೇಳಿಕೊಡಲಾಯಿತು ?
 ಸುಮಾರು 22 ಮಕ್ಕಳಿರುವ ಈ ಶಿಬಿರದಲ್ಹಿ
*ಕರಕುಶಲ ವಸ್ತುಗಳ ತಯಾರಿಕೆ.
* ಕ್ರಿಯಾಶೀಲವಾಗಿ ಚಿಂತನೆಗೀಡುಮಾಡುವ ತರಬೇತಿಗಳು
*ಆಟಗಳು:
ಆಟಗಳೆಂದರೆ ಸಾಮಾನ್ಯವಾದ ಆಟಗಳಲ್ಲ. ಅವರ ಯೋಚನಾ ಲಹರಿಯನ್ನು ಹೆಚ್ಚಿಸುವಂತ ಹತ್ತು ಹಲವು ರಂಗಕ್ಕೆ ಸಂಬಂಧಿಸಿದ ರಂಗದಾಟಗಳನ್ನು ಇಲ್ಲಿ ಆಡಿಸಲಾಗುತ್ತಿತ್ತು.
* ಇಂಗ್ಲೀಷ್ ಕಲಿಕೆಗೆ ಸಹಾಯವಾಗುವಂತೆ ಉಪನ್ಯಾಸಕಿ ಅಶ್ವಿನಿಯವರಿಂದ ತರಬೇತಿ ನಡೆಸಲಾಯಿತು.
* ವ್ಯಕ್ತಿತ್ವ ವಿಕಸನ ಹಾಗು ಮನಃಶಾಸ್ತ್ರದ ಕುರಿತಾಗಿ ಕುಮಾರಿ ಸುಷ್ಮಾ ಕಾರ್ಯಗಾರ ನಡೆಸಿಕೊಟ್ಟರು.
* ರಂಗಗೀತೆಗಳನ್ನು ಹೇಳಿಕೊಡಲಾಯಿತು.ರಂಗದ ಬಗ್ಗೆ ಮಾಹಿತಿ ಶಿಸ್ತುಗಳನ್ನೆಲ್ಲಾ ಬೆಳೆಸುವಂತಹ ನಿರಂತರವಾಗಿದ್ದವು.


ನಾಟಕ:
ಇಷ್ಟೆಲ್ಲಾ ಮಾನಸಿಕವಾಗಿ ಪುಷ್ಠಿಗೊಳಿಸಿ. ನಾಟಕ ಮಾಡಿಸಲು ಅಣಿಮಾಡಿಕೊಂಡೆವು. ಸತೀಶ್ ಮೇಷ್ಟ್ರುನಿರ್ದೇಶನದ ಹೊಣೆ ಹೊತ್ತು 'ಉಸಿರ' ಎಂಬ ಶೀರ್ಷಿಕೆಯಡಿ ನಾಟಕದ ತಾಲೀಮು ನಡೆಸಿದರು.
ಪ್ರಶ್ನೆಗಳು ಬರಿ ಪ್ರಶ್ನೆಗಳು ಎಂದು ಮುಗ್ದ ಮಕ್ಕಳ ಪ್ರಶ್ನೆಗಳೊಂದಿಗೆ ಆರಂಭಗೊಳ್ಳುವ ನಾಟಕ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಹಾಗೂ ಮಾನವೀಯ ಮೌಲ್ಯ ಉಳಿಸುವಲ್ಲಿ ಮತ್ತೆ ಪ್ರಶ್ನೆಯ ಜಿಜ್ಞಾಸೆಗೆ ನಮ್ಮನ್ನೆಲ್ಲಾ ಕೊಂಡ್ಯೊಯುತ್ತದೆ. 

ಗೋಣಿ ಚೀಲ, ಅಡಿಕೆ ಹಾಳೆ ಹಾಗು ತೆಂಗಿನ ಗರಿ ಬಳಸಿ ತಯಾರಿಸಿದ ಬ್ಯಾನರ್ .

ಹಳೆ ಸೀರೆಗಳಿಂದ ಅಲಂಕೃತಗೊಂಡ ಶಾಲೆ 

ಕೆಮ್ಮಣ್ಣು  ಹಾಗು ಸುಣ್ಣ ಬಳಕೆಯಿಂದ  ಕಾಂಪೌಂಡ್ ಮೇಲೆ ಮೂಡಿದ ಚಿತ್ತಾರ 

 
ಫ್ಲೆಕ್ಸ್ ನಲ್ಲಿ ನನ್ನ ಮೊಮ್ಮಗ ಎಲ್ಲಿರಬಹುದು ಎಂದು ಆಸಕ್ತಿಯಿಂದ ವೀಕ್ಷಿಸುತ್ತಿರುವ ಅಜ್ಜಿ

No comments:

Post a Comment